ಸ್ವಾವಲಂಬನೆ

ಕರ್ನಾಟಕ ಗ್ರಾಮೀಣ ಮಹಿಳಾ ಉದ್ಯಮಿದಾರರ ಉದ್ಯಮ ಅಭಿವೃದ್ಧಿ ಕಾರ್ಯಕ್ರಮ. ಉದ್ಯಮಗಳ ವಿಸ್ತರಣೆ, ಉನ್ನತೀಕರಣ, ಉತ್ಕೃಷ್ಟ, ಮಹಿಳಾ ಉದ್ಯಮಿಯಾಗಿ ನಿಮ್ಮ ವ್ಯವಹಾರವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಸದಾವಕಾಶ.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಸಂಜೀವಿನಿ“,  ನಡತೂರ್ ಎಸ್ ರಾಘವನ್ ಉದ್ಯಮಶೀಲತೆಯ ಕಲಿಕೆಯ ಕೇಂದ್ರದವರ (NSRCEL) ಸಹಯೋಗದೊಂದಿಗೆ ಕರ್ನಾಟಕ ಗ್ರಾಮೀಣ ಮಹಿಳಾ ಉದ್ಯಮಿಗಳ ವ್ಯವಹಾರವನ್ನು ನಿರ್ಮಿಸಲು ಮತ್ತು ಬೆಂಬಲಿಸುವ ಯೋಜನಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ

ಕರ್ನಾಟಕದ ಶ್ರೇಣಿ 2 ಮತ್ತು ಶ್ರೇಣಿ 3 ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರಸ್ತುತ ವ್ಯವಹಾರ ನಡೆಸುತ್ತಿರುವ ಮಹಿಳಾ ಮಾಲೀಕತ್ವದ ಉದ್ಯಮಗಳನ್ನು ಪ್ರೋತ್ಸಾಹಿಸಲು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ, ತಮ್ಮ ಉದ್ಯಮದ ವ್ಯವಹಾರವನ್ನು ಉತ್ತಮ ವ್ಯವಹಾರಿಕ ಮಾದರಿಯಾಗಿ ಕಾನೂನು ರೀತಿಯಲ್ಲಿ ವ್ಯವಹರಿಸುವುದಕ್ಕೆ ಹಾಗೂ ತಮ್ಮ ವ್ಯವಹಾರಕ್ಕೆ ಬೇಕಾದ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗುವುದು.

ಅವಕಾಶ ಯಾರಿಗೆ ಅನ್ವಯವಾಗುತ್ತದೆ?

ಪ್ರಸ್ತುತ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಉದ್ಯಮ ನಡೆಸುತ್ತಿರುವ ಮಹಿಳಾ ಉದ್ಯಮಿಗಳಿಗೆ ಅನ್ವಯಿಸುತ್ತದೆ.

ಕೆಳಗಿನ ನಿಬಂಧನೆಗಳು ಅನ್ವಯ :

ಮಹಿಳಾ ಸಂಸ್ಥಾಪಕರು ಮತ್ತು ಉದ್ಯಮದ ಪ್ರಮುಖ ನಿರ್ಧಾರಕರಾಗಿರಬೇಕು

ನಿಮ್ಮ ಉದ್ಯಮ ಕರ್ನಾಟಕ ರಾಜ್ಯ ಪ್ರದೇಶಕ್ಕೆ ಒಳಪಟ್ಟಿರಬೇಕು

ನಿಮ್ಮ ಉದ್ಯಮವು ಯಾವುದೇ ಕೃಷಿಯೇತರ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತಿರಬೇಕು

ಕನಿಷ್ಟ ಒಬ್ಬ ನೌಕರ ನಿಮ್ಮ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು ಅಥವ ಸಂಘ ಮತ್ತು ದೊಡ್ಡ ಉದ್ಯಮವಾಗಿದ್ದಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಪ್ರಮಾಣಪತ್ರವನ್ನು ಹೊಂದಿರಬೇಕು

ನೀವು ಅಸ್ತಿತ್ವದಲ್ಲಿರುವ ಉದ್ಯಮವನ್ನು ಹೊಂದಿದ್ದರೆ

ಹಿಂದಿನ 2 ಕೋವಿಡ್ 19 ಹಣಕಾಸು ವರ್ಷಗಳಲ್ಲಿ ನಿಮ್ಮ ವ್ಯವಹಾರದ ವಹಿವಾಟು ಕೆಳಕಂಡಂತಿರಬೇಕು :

ನೋಂದಾಯಿಸದ ವೈಯಕ್ತಿಕ ವ್ಯಾಪಾರಸ್ಥರು

  • ಸರಕು ಉತ್ಪಾದನೆ ವ್ಯವಹಾರವಾದರೆ 4 ಲಕ್ಷದವರೆಗೆ ವಹಿವಾಟಿರಬೇಕು
  • ಸೇವಾ ಉದ್ಯಮವಾಗಿದ್ದರೆ 3 ಲಕ್ಷದವರೆಗೆ ವಹಿವಾಟಿರಬೇಕು

ನೋಂದಾಯಿಸದ ಸಂಘ ಸಂಸ್ಥೆಗಳ ವ್ಯಾಪಾರಸ್ಥರು

  • ಸರಕು ಉತ್ಪಾದನೆ ವ್ಯವಹಾರವಾದರೆ 6 ಲಕ್ಷದವರೆಗೆ ವಹಿವಾಟಿರಬೇಕು
  • ಸೇವಾ ಉದ್ಯಮವಾಗಿದ್ದರೆ 5 ಲಕ್ಷದವರೆಗೆ ವಹಿವಾಟಿರಬೇಕು

ನೋಂದಾಯಿಸಿದ ಸಂಘ ಸಂಸ್ಥೆಗಳ ವ್ಯಾಪಾರಸ್ಥರು

  • ವೈಯಕ್ತಿಕ ಉದ್ಯಮವಾಗಿದ್ದರೆ 15 ಲಕ್ಷದವರೆಗೆ ವಹಿವಾಟಿರಬೇಕು
  • ಸಂಘ ಸಂಸ್ಥೆಯ ಉದ್ಯಮವಾಗಿದ್ದರೆ 12 ಲಕ್ಷದವರೆಗೆ ವಹಿವಾಟಿರಬೇಕು

ಕಾರ್ಯಕ್ರಮದ ಪ್ರಯೋಜನಗಳು

ಉತ್ಕೃಷ್ಟ ಬೆಂಬಲ

ನಿಮ್ಮ ವ್ಯವಹಾರವನ್ನು ಉನ್ನತೀಕರಿಸಲು ಕ್ರಿಯಾತ್ಮಕವಾಗಿ ಉಕೃಷ್ಟಗೊಳ್ಳಲು ಬೆಂಬಲ ನೀಡಲಾಗುವುದು.

ವ್ಯವಹಾರಿಕ ಜ್ಞಾನ

ಉದ್ಯಮದ ವ್ಯವಹಾರಿಕ ಕಾರ್ಯಕ್ಷಮತೆ ಅಭಿವೃದ್ದಿಗೊಳ್ಳಿಸಲು ಬೇಕಾದ ಸಮಗ್ರ ಮಾಹಿತಿಯನ್ನು ಕೊಡಲಾಗುವುದು

ಮೌಲ್ಯಮಾಪನ ಅಗತ್ಯತೆ

ನಿಮ್ಮ ವ್ಯವಹಾರದ ಸ್ವಭಾವಗಳನ್ನು ಅಧ್ಯಯನ ಮಾಡಿ ನಿಮ್ಮ ವ್ಯವಹಾರದ ಅಭಿವೃದ್ಧಿಗೆ ಅಗತ್ಯವಾದ ಮೌಲ್ಯಮಾಪನ ಮಾಡಿಕೊಡಲಾಗುವುದು

ವ್ಯವಹಾರ ಸಂಬಂಧಿತ ಜಾಲ ತಾಣಕ್ಕೆ ಪ್ರವೇಶ

NSRCEL ಮತ್ತು ಸಂಜೀವಿನಿ ಜಾಲತಾಣದಲ್ಲಿ ಲಭ್ಯವಿರುವ ಮಾರ್ಗದರ್ಶಕರು ಮತ್ತು ಪರಿಸರ ವ್ಯವಸ್ಥೆಯ ತಜ್ಞರುಗಳ ಸಲಹೆ ಪಡೆಯಲು ಮುಕ್ತವಾಗಿ ಪ್ರವೇಶ ಕಲ್ಪಿಸಿಕೊಡುವುದು

ನೋಂದಣಿಗಳನ್ನು ಸುಗಮಗೊಳಿಸಿ

ಅಗತ್ಯವಿದ್ದರೆ ನೋಂದಣಿಗಳು ಮತ್ತು ಪ್ರಮಾಣೀಕರಣಗಳಿಗೆ ಅರ್ಜಿ ಸಲ್ಲಿಸಲು ಸಹಕಾರ.

ತರಬೇತಿ

ನಿಮ್ಮ ವ್ಯವಹಾರಕ್ಕೆ ಅಗತ್ಯವಾದ ಉನ್ನತ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ವೃತ್ತಿಪರ ನುರಿತ ಅಧ್ಯಾಪಕರುಗಳು ಮತ್ತು ಉದ್ಯಮ ತಜ್ಞರುಗಳಿಂದ ತರಬೇತಿ ಹಾಗು ಸಹಾಯ ನೀಡಲಾಗುವುದು.

ಮಾರ್ಗದರ್ಶನ

ನಿಮ್ಮ ವ್ಯವಹಾರವನ್ನು ಅಧ್ಯಯನ ಮಾಡಿ ವೈಯಕ್ತಿಕ ಸಂಸ್ಥೆಗಳಲ್ಲಿನ ವ್ಯವಹಾರಿಕ ನ್ಯೂನ್ನತೆಗಳನ್ನು ಬಲಪಡಿಸಲು ಮತ್ತು ಅಭಿವೃದ್ಧಿಗೊಳಿಸಲು ನೆರವಾಗುತ್ತದೆ.

ಮಾರುಕಟ್ಟೆಯ ಸಂಪರ್ಕ

ನಿಮ್ಮ ಉದ್ಯಮದ ವ್ಯವಹಾರಕ್ಕೆ ದೇಶದ, ರಾಜ್ಯದ ಹಾಗು ಇತರ ಭಾಗಗಳಲ್ಲಿರುವ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸಿಕೊಡುವುದು

ಬಂಡವಾಳ ಹೂಡಿಕೆ

ಕಾರ್ಯಕ್ರಮದ ವತಿಯಿಂದ ಮತ್ತು ಇತರೆ ಮೂಲಗಳಿಂದ ಉದ್ಯಮದ ವ್ಯವಹಾರಕ್ಕೆ ಬೇಕಾದ ಬಂಡವಾಳ ಹೂಡಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಹಕರಿಸಲಾಗುವುದು

ಬಹುಮಾನಗಳು

ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ಅತ್ಯುತ್ತಮ ವ್ಯಾಪಾರ ಬೆಳವಣಿಗೆಯ ಯೋಜನೆಯನ್ನು ಪ್ರಸ್ತುತಪಡಿಸುವ ಉದ್ಯಮಕ್ಕೆ, ತಮ್ಮ ಉದ್ಯಮವನ್ನು ವಿಸ್ಥರಿಸಲು ರೂ 3 ಲಕ್ಷದಿಂದ ರೂ 15 ಲಕ್ಷದವರೆಗೆ ದನ ಸಹಾಯ ಮತ್ತು ಬಡ್ಡಿ ರಹಿತ ಸಲವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ

ಸಂದರ್ಶನದಲ್ಲಿ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುವುದು

1

ಮಹಿಳಾ ಸಂಸ್ಥಾಪಕರ ವ್ಯವಹಾರ ಜ್ಞಾನ ಮತ್ತು ವ್ಯವಹಾರದ ಆಸಕ್ತಿಯ ಬಗ್ಗೆ

2

ವ್ಯವಹಾರದ ಬಗ್ಗೆ ವಾಸ್ತವಿಕ ನಿಖರತೆ

3

ಸಂಸ್ಥಾಪಕರಿಗೆ ಅವರ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಬೇಕಾದ ಆಸಕ್ತಿ ಮತ್ತು ಮಾಹಿತಿ ವಿನಿಮಯದ ಬಗ್ಗೆ ತಿಳುವಳಿಕೆ

4

ಉದ್ಯಮದ ಭೌತಿಕ ತಪಾಸಣೆ

ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಕಾರ್ಯಕ್ರಮಕ್ಕೆ ಅರ್ಹರಾದ ಅಭ್ಯರ್ಥಿಗಳ ಹೆಸರುಗಳನ್ನು cohort ವೆಬ್ ಸೈಟ್ ಅಲ್ಲಿ ಸೇರಿಸಲಾಗುವುದು.

ಪ್ರಾರಂಭ ಹಂತದಲ್ಲಿರುವ ಈ ಕೆಳಕಂಡ ಉದ್ಯಮಗಳು ಅರ್ಹರಿಲ್ಲ

  1. ಕೃಷಿ, ಪ್ರಾಥಮಿಕ ಉತ್ಪಾದನೆ, / ಒಟ್ಟುಗೂಡಿಸುವಿಕೆ ಚಟುವಟಿಕೆಗಳು
  2. ಹಿಂಭಾಗದ ಚಟುವಟಿಕೆಗಳು ( ಹಿಂಭಾಗದ ಕೋಳಿ ಸಾಕಾಣಿಕೆ ಚಟುವಟಿಕೆಗಳು, ನೇಯ್ಗೆಯ ಪೂರ್ವ ತಯಾರಿಕ ಚಟುವಟಿಕೆಗಳು, ಹೆಣಿಕೆಯ ಉದ್ದ ನೂಲು, ಬಾಬೀನ್ ಜೋಡಣೆ ಚಟುವಟಿಕೆಗಳು )
  3. ಸಗಟು (ರಿಟೇಲ್ ) ವ್ಯಾಪಾರದ ಉದ್ಯಮಗಳು
  4. ಕನಿಷ್ಟ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲದ ಉದ್ಯಮಗಳು
  5. ಪರಿಸರ ಸಂರಕ್ಷಣೆಗಳಿಗೆ ಅನುಗುಣವಾಗಿಲ್ಲದ ಉದ್ಯಮಗಳು
  6. NRLM/ NRETP/ NULM/ DDU GKY ಪ್ರಾಜೆಕ್ಟ್ ಸಿಬ್ಬಂದಿಗಳಿಂದ ನಿರ್ವಹಿಸುತ್ತಿರುವ ಉದ್ಯಮಗಳು

ಪುನರಾವರ್ತಿಸಿದ ಪ್ರಶ್ನೆಗಳು

ಸ್ವಾವಲಂಬನೆ ಕರ್ನಾಟಕ ಗ್ರಾಮೀಣ ಮಹಿಳಾ ಉದ್ಯಮ ಅಭಿವೃದ್ಧಿ ಕಾರ್ಯಕ್ರಮದ ಮೂಲ ಉದ್ದೇಶವೇನು?

ಕಾರ್ಯಕ್ರಮವು ಗ್ರಾಮೀಣ ಮಹಿಳಾ ಉದ್ಯಮದಾರರು ಅವರ ವ್ಯವಹಾರವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಕೃಷಿಯೇತರ ವ್ಯವಹಾರದಲ್ಲಿ ತೊಡಗಿಕೊಂಡಿರುವ ಉದ್ಯಮದ ಅಭಿವೃದ್ಧಿಗೊಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ಅನುಕೂಲಗಳನ್ನು ಪಡೆಯಲು ನಾವು ಬೆಂಗಳೂರಿಗೆ ಸ್ಥಳಾoತರಗೊಳ್ಳಬೇಕೆ?

ಇಲ್ಲ. ನಮ್ಮ ಸಂಸ್ಥೆಯ ತಂಡ ನಿಮ್ಮ ಸ್ಥಳಕ್ಕೆ ಭೇಟಿ ನೀಡಿ, ನಿಮ್ಮ ವ್ಯವಹಾರವನ್ನು ಅಭಿವೃದ್ಧಿಗೊಳಿಸಲು ಸಹಕರಿಸುತ್ತೇವೆ. ನೀವು ಬೆಂಗಳೂರಿಗೆ ಸ್ಥಳಾoತರಗೊಳ್ಳುವ ಅವಶ್ಯಕತೆ ಇಲ್ಲ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಬೆಂಗಳೂರಿಗೆ ಬರಬೇಕೆ?

ಹೌದು. ಕಾರ್ಯಕ್ರಮದ ಸಮಯದಲ್ಲಿ ಒಂದು ಬಾರಿಯಾದರು ಬೆಂಗಳೂರಿಗೆ ಬರಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ನಿಮಗೆ ಒಂದು ತಿಂಗಳ ಮುಂಚಿತವಾಗಿ ತಿಳಿಸಲಾಗುತ್ತದೆ.

ಈ ಕಾರ್ಯಕ್ರಮದಿಂದ ನಾವು ನಿರೀಕ್ಷಿಸಬಹುದಾದ ಸಂಗತಿಗಳೇನು?

ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ನಾವು ಕೂಡ ಕೆಲಸ ನಿರ್ವಹಿಸುತ್ತೇವೆ. ನಿಮ್ಮ ವ್ಯವಹಾರದ ಸ್ವಭಾವವನ್ನು, ನಿಮ್ಮ ವ್ಯವಹಾರದ ಸ್ಥಿತಿಯನ್ನು, ನಿಮ್ಮ ವ್ಯವಹಾರಕ್ಕೆ ಸೂಕ್ತವಾದ ಅವಶ್ಯಕತೆಗಳನ್ನು ತಿಳಿದುಕೊಂಡು, ನಿಮ್ಮ ಉದ್ಯಮದ ಅಭಿವೃದ್ಧಿಗೆ ಸರಿ ಹೊಂದುವ ರೂಪುರೇಷೆಯನ್ನು ರಚಿಸಿ ಮತ್ತು ಅದನ್ನು ಸಾಧಿಸುವುದಕ್ಕೆ ನಿಮಗೆ ಸಹಕರಿಸುತ್ತೇವೆ.

ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾರೆಲ್ಲ ನೋಂದಾಯಿಸಿಕೊಳ್ಳಬಹುದು?

ಉದ್ಯಮದ ಸಂಸ್ಥಾಪಕರು ನೋಂದಾಯಿಸಿಕೊಳ್ಳಬಹುದು.

ನಾನು ಸ್ವಸಹಾಯ ಸಂಘದಲ್ಲಿ ಈಗಾಗಲೇ ನೋಂದಾಯಿಸಿದ್ದೀನಿ, ನಾನು ನಿಮ್ಮ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಬಹುದೇ?

ಹೌದು. ನೀವು ಈಗಾಗಲೇ ಸ್ವಸಹಾಯ ಸಂಘದಲ್ಲಿ ನೋಂದಾಯಿಸಿದ್ದರು, ನಮ್ಮ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಉತ್ತೇಜನ ನೀಡುತ್ತೇವೆ.

ಸ್ವಸಹಾಯ ಸಂಘ ಅಥವ ಸಂಘ ಸಂಸ್ಥೆ ನಿಮ್ಮ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಬಹುದೇ?

ಹೌದು. ನೀವು ವೈಯಕ್ತಿಕ ಮತ್ತು ಸಂಘ ಸಂಸ್ಥೆಯೊಂದಿಗೆ ಕಾರ್ಯಕ್ರಮಕ್ಕೆ ನೋಂದಾಯಿಸಬಹುದು.

ನನ್ನ ಉದ್ಯಮ ಸಂಜೀವಿನಿ / NRLM ಸಹಾಯ ಸಂಸ್ಥೆಯ ಉದ್ಯಮವಾಗಿರಬೇಕೆ?

ಇಲ್ಲ. ನಿಮ್ಮ ಉದ್ಯಮವು ಸಂಜೀವಿನಿ /NRLM ಸಹಾಯ ಸಂಸ್ಥೆಯ ಉದ್ಯಮವಾಗಿರಬೇಕಿಲ್ಲ.

ಕಾನೂನು ರೀತಿಯಲ್ಲಿ ನಮ್ಮ ಉದ್ಯಮವು ನೋಂದಾಯಿಸಿಲ್ಲ. ಆದರೆ ನಾನು ಅರ್ಜಿ ಸಲ್ಲಿಸಬಹುದೆ?

ಹೌದು. ನೀವು ಕಾನೂನು ರೀತಿಯಲ್ಲಿ ನೋಂದಾಯಿಸದಿದ್ದರೂ, ಆದರೆ ನಿಮ್ಮ ಉದ್ಯಮದಲ್ಲಿ ಸರಕು, ಸೇವೆ ಮತ್ತು ಆದಾಯವಿರಬೇಕು. ಆಗ ನೀವು ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಕಾನೂನು ರೀತಿಯಲ್ಲಿ ನಿಮ್ಮ ಉದ್ಯಮವನ್ನು ನೋಂದಾಯಿಸಿಕೊಳ್ಳಲು ನೆರವಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ನನ್ನ ಉದ್ಯಮದಲ್ಲಿ ನೌಕರರಿಲ್ಲ, ಆದರೆ ನಮ್ಮ ಉದ್ಯಮವನ್ನು ಮತ್ತೊಂದು ಸಂಸ್ಥೆಯ ನೌಕರರಿಂದ ನಡೆಸಲಾಗುತ್ತಿದೆ. ನಾನು ಅರ್ಜಿ ಸಲ್ಲಿಸಬಹುದೆ?

ಇಲ್ಲ. ಉದ್ಯಮದಾರರು / ಸಂಸ್ಥಾಪಕರು ನಡೆಸುತ್ತಿರುವ ಉದ್ಯಮಗಳು ಮಾತ್ರ ಅರ್ಜಿ ಸಲ್ಲಿಸಬಹುದು ಅಥವ ಉದ್ಯಮದ ನೌಕರರು ಅರ್ಜಿ ಸಲ್ಲಿಸಬಹುದು.

ಕೃಷಿಯೇತರ ಚಟುವಟಿಕೆಗಳ ಉದ್ಯಮಗಳು ಅಂದರೆ ಯಾವುವು?

ಕೃಷಿಯೇತರ ಮತ್ತು ಪ್ರಾಣಿಗಳ ಪಾಲನ ವ್ಯಾಪಾರ ಚಟುವಟಿಕೆಗಳು ಎಂದರ್ಥ. ಆದರೆ, ಕೋಳಿ ಸಾಕಾಣಿಕೆ ವ್ಯಾಪಾರ ಅಥವ ಕೃಷಿ ಉತ್ಪನ್ನಗಳ ಸಂಸ್ಕರಣೆ ವ್ಯಾಪಾರಗಳು ಕಾರ್ಯಕ್ರಮಕ್ಕೆ ಸೇರುವಂತಿಲ್ಲ.

ನಾನು ಒಂದಂಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಹುದೆ?

ನೀವು ಆಲೋಚಿಸಿ ಸಂಸ್ಕರಿಸಿ ಒಂದೇ ಅರ್ಜಿಯನ್ನು ಸಲ್ಲಿಸಲು ಸೂಚಿಸುತ್ತೇವೆ.

ನಾನು ಎರಡು ಉದ್ಯಮವನ್ನು ಹೊಂದಿದ್ದೇನೆ, ಹಾಗಾದರೆ ಎರಡು ಉದ್ಯಮಕ್ಕೆ ಅರ್ಜಿ ಸಲ್ಲಿಸಬಹುದೆ?

ಹೌದು. ನೀವು ಎರಡು ಉದ್ಯಮಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ನಾವು ಎರಡು ಉದ್ಯಮವನ್ನು ಪರಿಶೀಲಿಸಿ ಅರ್ಹತೆಗನುಗುಣವಾಗಿ ಒಂದು ಉದ್ಯಮವನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-12-2022, ನಿಗದಿತ ದಿನಾಂಕವನ್ನು ಮುಂದೂಡುವುದಿಲ್ಲ.

ನಾವು ಅರ್ಜಿ ಸಲ್ಲಿಸುವುದು ಹೇಗೆ?

https://nsrcel-swavalambane.accubate.app/ext/form/851/1/apply ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಅಥವ ಜಿಲ್ಲಾ ಪಂಚಾಯತ್ ಕಛೇರಿಗೆ ಭೇಟಿ ನೀಡಿ NRLM ವಿಭಾಗದಲ್ಲಿ ಲಭ್ಯವಿರುವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನೆರವಾಗುತ್ತಾರೆ.

ಈ ಕಾರ್ಯಕ್ರಮದ ವೇಳಾಪಟ್ಟಿಯನ್ನು ನಾನು ಎಲ್ಲಿ ಪಡೆಯಬಹುದು?

ಕಾರ್ಯಕ್ರಮದ ವೇಳಾಪಟ್ಟಿಯನ್ನು ನೀವು ಆಯ್ಕೆಯಾದರೆ ನಮ್ಮ ಸಂಸ್ಥೆಯ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಾರೆ.

ನಮಗೆ ಈ ಕಾರ್ಯಕ್ರಮದ ಬಗ್ಗೆ ಪ್ರಶ್ನೆಗಳಿದ್ದರೆ ಯಾರನ್ನು ಸಂಪರ್ಕಿಸಬೇಕು?

ನಿಮ್ಮ ಪ್ರಶ್ನೆಗಳಿಗೆ ನೀವು karnatakawomen@nsrcel.iimb.ac.in ಗೆ ಸಂಪರ್ಕಿಸಬಹುದು

ನಾನು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದರ ಬಗ್ಗೆ ತಿಳಿಯುವುದು ಹೇಗೆ?

ನಮ್ಮ ತಂಡದ ಸದಸ್ಯರು ನಿಮಗೆ ಕರೆ ಮಾಡುತ್ತಾರೆ
ನೀವು ನಿಮ್ಮ USERNAME…(ನಿಮ್ಮ ಇಮೇಲ್ )
PASSWORD (ನೀವು ಅರ್ಜಿ ಸಲ್ಲಿಸಿದಾಗ ನಮ್ಮ ಸಂಸ್ಥೆಯಿಂದ ನಿಮಗೆ ಇಮೇಲ್ ಕಳುಹಿಸಿರುತ್ತಾರೆ )

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ಉದ್ಯಮದ ಎಷ್ಟು ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ?

ಉದ್ಯಮದ ಎಲ್ಲ ಸಂಸ್ಥಾಪಕರು ಅರ್ಜಿ ಸಲ್ಲಿಸಬಹುದು.

ಸವಾಲು ನಿಧಿಯ ಮೂಲಕ ಎಷ್ಟು ಬಹುಮಾನಗಳನ್ನು ಪಡೆಯಬಹುದು?

ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎಲ್ಲಾ ಅಭ್ಯರ್ಥಿಗಳು ಮುಂದಿನ ವರ್ಷದ ಉದ್ಯಮದ ಬೆಳವಣಿಗೆಯ ಯೋಜನೆಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಉತ್ತಮವಾದ ಉದ್ಯಮದ ಬೆಳವಣಿಗೆಯ ಯೋಜನೆಯು 3 ರಿಂದ 15 ಲಕ್ಷದವರೆಗೆ ಬಹುಮಾನ ಮೊತ್ತವನ್ನು ಅನುದಾನ ಹಾಗೂ ಬಡ್ಡಿ ರಹಿತ ಸಾಲವಾಗಿ ಕೊಡಲಾಗುತ್ತದೆ.

If you have any queries, you can contact us karnatakawomen@nsrcel.iimb.ac.in